Free Christian classic ebooks for you to download:
Browse books now

Multilingual Online Bible


Kannada KJV
Type your search text here


Choose a Bible


Select book or range
Chapter


Kannada KJV, 1 Peter 4

1   ಕ್ರಿಸ್ತನು ಶರೀರದಲ್ಲಿ ನಮಗೋಸ್ಕರ

2   ಹೀಗೆ ಶರೀರದಲ್ಲಿ ಇನ್ನು ಉಳಿದಿರುವ ತನ್ನ ಜೀವಿತಕಾಲದಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವನು.

3   ಬಂಡುತನ ದುರಾಶೆ ಕುಡಿಕತನ ದುಂದೌತನ ಮದ್ಯಪಾನಗೋಷ್ಠಿ ಅಸಹ್ಯವಾದ ವಿಗ್ರಹಾರಾಧನೆ ಗಳು ಇವುಗಳನ್ನು ನಡಿಸುವದರಲ್ಲಿಯೂ ಅನ್ಯಜನರಿಗೆ ಇಷ್ಟವಾದದ್ದನ್ನು ಮಾಡುವದರಲ್ಲಿಯೂ ನಮ್ಮ ಜೀವಿತ ದಲ್ಲಿ ಕಳೆದುಹೋದ ಕಾಲವೇ ಸಾಕು.

4   ತಾವು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಅವರೊಂದಿಗೆ ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯ ಪಟ್ಟು ನಿಮ್ಮನ್ನು ದೂಷಿಸುತ್ತಾರೆ.

5   ಅವರು ಬದುಕುವ ವರಿಗೂ ಸತ್ತವರಿಗೂ ನ್ಯಾಯತೀರಿಸುವದಕ್ಕಾಗಿ ಸಿದ್ಧ ವಾಗಿರುವಾತನಿಗೆ ಲೆಕ್ಕ ಒಪ್ಪಿಸುವರು.

6   ಈ ಕಾರಣದಿಂದ ಸತ್ತಿರುವವರು ಶರೀರದಲ್ಲಿ ಮನುಷ್ಯರಿಗೆ ತಕ್ಕಂತೆ ನ್ಯಾಯತೀರ್ಪನ್ನು ಹೊಂದಿ ಆತ್ಮದಲ್ಲಿ ದೇವರಿಗಾಗಿ ಜೀವಿಸುವಂತೆ ಅವರಿಗೂ ಸುವಾರ್ತೆ ಸಾರಲ್ಪಟ್ಟಿತು.

7   ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಸ್ವಸ್ಥಚಿತ್ತರಾಗಿಯೂ ಪ್ರಾರ್ಥನೆಗೆ ಎಚ್ಚರ ವಾಗಿಯೂ ಇರ್ರಿ.

8   ಎಲ್ಲವುಗಳಿಗೆ ಮಿಗಿಲಾಗಿ ನಿಮ್ಮ ನಿಮ್ಮೊಳಗೆ ಯಥಾರ್ಥವಾದ ಪ್ರೀತಿಯಿರಲಿ; ಯಾಕಂದರೆ ಪ್ರೀತಿಯು ಎಷ್ಟೋ ಪಾಪಗಳನ್ನು ಮುಚ್ಚುತ್ತದೆ.

9   ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.

10  ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.

11  ಒಬ್ಬನು ಬೋಧಿಸು ವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲಾದರಲ್ಲಿ ಯೇಸು ಕ್ರಿಸ್ತನ ಮೂಲಕ ದೇವರಿಗೆ ಮಹಿಮೆ ಉಂಟಾಗುವದು. ಯೇಸು ಕ್ರಿಸ್ತನಿಗೆ ಸ್ತೋತ್ರವೂ ಆಧಿಪತ್ಯವೂ

12  ಪ್ರಿಯರೇ, ನಿಮ್ಮನ್ನು ಶೋಧಿಸುವದಕ್ಕೆ ಅಗ್ನಿ ಯಂತಿರುವ ಪರಿಶೋಧನೆಗಾಗಿ ನೀವು ಆಶ್ಚರ್ಯಪಡ ಬೇಡಿರಿ; ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿ ತೆಂದು ಯೋಚಿಸಬೇಡಿರಿ.

13  ನೀವು ಕ್ರಿಸ್ತನ ಬಾಧೆ ಗಳಲ್ಲಿ ಪಾಲುಗಾರರಾಗಿರುವದರಿಂದ ಸಂತೋಷವುಳ್ಳ ವರಾಗಿರ್ರಿ; ಇದಲ್ಲದೆ ಆತನ ಮಹಿಮೆಯ ಪ್ರತ್ಯಕ್ಷತೆ ಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.

14  ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ.

15  ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನನುಭವಿಸ ಬಾರದು.

16  ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.

17  ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯ ತೀರ್ಪಿನ ಸಮಯವು ಬಂದದೆ; ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರುವದು?

18  ನೀತಿವಂತನೇ ರಕ್ಷಣೆಹೊಂದುವದು ಕಷ್ಟವಾದರೆ ಭಕ್ತಿಹೀನನೂ ಪಾಪಿಷ್ಠನೂ ನಿಲ್ಲುವದು ಎಲ್ಲಿ?

19  ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡು ವವರು ಒಳ್ಳೇದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಲಿ.


1 Peter 3    Choose Book & Chapter    1 Peter 5

Kannada is spoken by 35,300,000 in India.

This Kannada KJV Bible module is completely free of cost. You can use it freely and you can redistribute freely. Please don't make money of this application. Word Of God says "Freely you have received, freely give - Matthew 10:8". Let every one make use of "Word Of God". Courtesy of the Word Of God Team


Licensed to Jesus Fellowship. All Rights reserved. (Script Ver 2.0.2)
© 2002-2021. Powered by BibleDatabase with enhancements from the Jesus Fellowship.